ಹವಾಮಾನ ವರದಿ| ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಭಾರೀ ಮಳೆ‌ನ ಮುನ್ಸೂಚನೆ| ಹಲವು ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದ್ದು, ಇಂದು ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 18 ರಿಂದ 21 ರವರೆಗೆ ಜೋರಾದ ಗಾಳಿಯೊಂದಿಗೆ ಕರಾವಳಿ ಜಿಲ್ಲೆಗಳಿಗೆ ಮತ್ತು ಜುಲೈ 17 ರಿಂದ 21 ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಧಿಕ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 19 ರಿಂದ 21ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ವಿಪರೀತ ಮಳೆಯಿಂದಾಗಿ ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್​, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆ ಸುರಿಯಲಿದೆ. ಗೋಕರ್ಣ, ಕುಂದಾಪುರ, ಮಂಕಿ, ಲಿಂಗನಮಕ್ಕಿ, ಸಿದ್ದಾಪುರ, ಹೊನ್ನಾವರ, ಕೊಲ್ಲೂರು, ಕೊಟ್ಟಿಗೆಹಾರ, ಭಾಗಮಂಡಲ, ಕೊಪ್ಪ, ಶೃಂಗೇರಿ, ಕುಮಟಾ, ಸಿದ್ದಾಪುರ, ಕ್ಯಾಸಲ್​ರಾಕ್, ಚಿಕ್ಕಮಗಳೂರು, ಕಮ್ಮರಡಿ, ಶಿರಾಲಿ, ಕದ್ರಾದಲ್ಲಿ ಹೆಚ್ಚಿನ ಮಳೆ ಸುರಿದಿದೆ.

ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಕಷ್ಟಕರವಾಗಿದೆ. ಇತ್ತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ, ಸಾಕಷ್ಟು ಕಡೆ ಭೂ ಕುಸಿತ ಸಂಭವಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಿಸಲಾಗಿದ್ದು ಮಳೆ ಹೆಚ್ಚಲಿದೆ. ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್​, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು ಮಳೆ ವಿಪರೀತವಾಗಲಿದೆ.

ಬೆಂಗಳೂರಿನಲ್ಲಿ ಮೋಡಮುಸುಕಿದ ವಾತಾವರಣವಿದ್ದು, ಕಳಸ, ಉಡುಪಿ, ಸೋಮವಾರಪೇಟೆ, ಕಾರ್ಕಳ, ತ್ಯಾಗರ್ತಿ, ಎನ್​ಆರ್​ಪುರ, ಮೂರ್ನಾಡು, ಬನವಾಸಿ, ಯಲ್ಲಾಪುರ, ಧರ್ಮಸ್ಥಳ, ಪುತ್ತೂರು, ಮೂಡಿಗೆರೆ, ಉಪ್ಪಿನಂಗಡಿ, ಸುಳ್ಯ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗಲಿದೆ.

ರಾಜ್ಯಾದ್ಯಂತ ನೈರುತ್ಯ ಮಾನ್ಸೂನ್‌ ಸಕ್ರಿಯವಾಗಿದ್ದು ಅನೇಕ ಕಡೆ ಭಾರೀ ಮಳೆ ಆಗುತ್ತಿದೆ. ನಿನ್ನೆ(ಮಂಗಳವಾರ) ಆಗುಂಬೆಯಲ್ಲಿ 33, ಅಂಕೋಲಾದಲ್ಲಿ 28, ಕಾರವಾರದಲ್ಲಿ 23, ಗೇರ್ಸೊಪ್ಪದಲ್ಲಿ 21 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಗೋಕರ್ಣ, ಕುಂದಾಪುರ, ಮಂಕಿ, ಲಿಂಗನಮಕ್ಕಿ, ಸಿದ್ದಾಪುರದಲ್ಲಿ 19 ಸೆಮೀ, ಉಡುಪಿ, ಹೊನ್ನಾವರ, ಕೊಲ್ಲೂರು, ಕೊಟ್ಟಿಗೆಹಾರ, ಬಾಗಮಂಡಲ, ಕೊಪ್ಪ, ಶೃಂಗೇರಿಯಲ್ಲಿ 17 ಸೆಮೀ, ಕುಮಟಾ, ಸಿದ್ದಾಪುರ, ಕ್ಯಾಸಲ್‌ ರಾಕ್‌, ಕೋಟ, ಚಿಕ್ಕಮಗಳೂರು, ಕಮ್ಮರಡಿ, ಶಿರಾಲಿ, ಕದ್ರಾದಲ್ಲಿ ತಲಾ 12 ಸೆಮೀನಷ್ಟು ಮಳೆ ಆಗಿದೆ.

Leave a Comment